ಹಿಂತಿರುಗಿ ನೋಡಲಾರೆ..!

ಮಮತಾ ದೇವ

ಇಂದಿನ ಸೊಬಗನ್ನು ಸವಿಯುವ ಹೊತ್ತು..
ನೆನಪಾಗದಿರಲಿ ಹಳೆಯ ಕನಸುಗಳು ಕ್ಷಣ ಹೊತ್ತೂ..

ಅಂದು ಹೆಣೆದ ಗೊಂದಲದ ಬಲೆಯೇಕೆ ಇಂದು ?
ನಿಶ್ಚಿತತೆಯ ಕಡೆಗಿರಲು ಪ್ರಬಲ ಗುರಿ ಇಂದು.

ಹಿಂತಿರುಗಿ ನೋಡಲಾರೆ ಮಣ್ಣುಗೂಡಿದ ಕನಸುಗಳ ಪರಿಧಿ
ಚಿಂತಿಸದೆ ಸಾಗುತಿಹೆ ಭವ್ಯ ಭವಿಷ್ಯದ ಹೊಸ ಹಾದಿ !

ಆ ದಟ್ಟ ಕತ್ತಲಿನ ದಾರಿಯನ್ನರಸಿ ಹೋಗುವುದೇ ವ್ಯರ್ಥ..
ಹೊಂಗಿರಣ ತುಂಬಿರುವೀ ಅಮೂಲ್ಯ ಕ್ಷಣಗಳೇ ಪರಮಾರ್ಥ.

ವಾಸ್ತವವೇ ಅಭಿಜಾತವಾಗಿರಲು ಹಳೆಯ ಕಹಿಯೇಕೆ ಬೇಕು ?
ಹೊಸ ಕನಸುಗಳು ಆವರಿಸಿರಲು..ಹಿಂತಿರುಗಿ ನೋಡುವುದೇಕೆ ಬೇಕು..?

Advertisements

2 Comments (+add yours?)

 1. ಪುಷ್ಪರಾಜ್ ಚೌಟ
  Jul 27, 2013 @ 09:55:20

  ನಿನ್ನೆಗಳು ಸವೆದಿರಲು, ಬೆನ್ನು ಬೀಳುವ ಹಂಬಲವದೇಕೆ? ಇಂದು ಜೊತೆಗಿರಲು ಕಣ್ಣು ತೆರೆದಿಟ್ಟು ಮುಂದೆ ನಡೆಯಬೇಕು, ನಾಳೆಗಳು ಬೆಳಕಾಗಬಹುದು ನನ್ನ ಜಗಕೆ!

  Reply

  • ಮಮತಾ ದೇವ
   Jul 27, 2013 @ 12:45:19

   ನಿಜ. ಪುಷ್ಪರಾಜ್ ಚೌಟರೆ. ಧನ್ಯವಾದಗಳು..ನಿನ್ನೆ ಕಂಡ ಕನಸು ನಿನ್ನೆಗೆ..ಇಂದು ಕಂಡ ವಾಸ್ತವ ಇಂದಿಗೆ..ಇರಲಿ ಭೆಳಕಿನ ಬದುಕು ನಾಳೆಗೆ.. 🙂

   Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: